ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿ ಮನೆಗೆ ಬಂದ ನಂತರ ಒಂದು ರೂಮು ನಾನು ನನ್ನ ಮಗಳು ಸದಾ ಜೊತೆಗಿರುತ್ತಿದ್ದೆವು
ಒಂದು ರೀತಿಯಲ್ಲಿ ತಾಯಿ ಮಗು ಸಂಭಂಧ ಇನ್ನಷ್ಟು ಗಟ್ಟಿಯಾಗಲೆಂದು ಈ ರೀತಿ ಕೂಡಿ ಹಾಕುತ್ತಾರೆಂದು ಅನಿಸುತ್ತದೆ.
ಆ ದಿನಗಳಲ್ಲಿ ನನ್ನ ಹಾಗು ನನ್ನ ಮಗಳ ಭಾಂಧವ್ಯ ಬೆಳೆಯತೊಡಗಿತು
ಸದಾ ನನ್ನ ಜೊತೆಮಲಗಿ ಅವಳಿಗೆ ನನ್ನ ಮೈ ಶಾಖದ ಪರಿಚಯವಾಗತೊಡಗಿತೇನೋ . ನಾನು ಒಂದು ವೇಳೆ ಅವಳ ಮೇಲಿನಿಂದ ಕೈ ತೆಗೆದರೆ ಸಾಕು ಅಳುತ್ತಿದ್ದಳು.
ಅಬ್ಬಾ ಅದೆಷ್ಟು ಅಧಿಕಾರ ಅವಳಿಗೆ ನನ್ನ ಮೇಲೆ .ಇನ್ನೂ ಭೂಮಿಗೆ ಬಂದು ಆರು ದಿನವೂ ಕಳೆದಿಲ್ಲ ಎಂದೆನಿಸುತ್ತಿತ್ತು.
ಜೊತೆಗೆ ಹಸಿವಾದಾಗಲೆಲ್ಲ ನನ್ನೆಡೆಗೆ ತಿರುಗಬೇಕೆಂಬ ಅವಳ ಬುದ್ದಿಗೆ ನಿಜಕ್ಕೂ ಆಶ್ಚರ್ಯವಾಗುತ್ತಿತ್ತು
ಹಾಲುಗಲ, ಪುಟ್ಟ ಪುಟ್ಟ ತುಟಿಗಳು.ಮೊದಲನೆ ದಿನ ಇದ್ದ ಬಣ್ಣ ಈಗ ಬಿಳುಪಾಗಿ ಬದಲಾಗಿತ್ತು. ಅವಳು ಬೆಳೆಯುತ್ತಿದ್ದಂತೆಲ್ಲಾ ಅವಳ ರೂಪವೂ ಇನ್ನು ಮುದ್ದಾಗುತ್ತಿತ್ತು.
"ಪ್ರೀತಿ ಲೋಕದ ಸೂರ್ಯ ನೀನು, ಮೇಘರಾಜನ ಚಂದ್ರ ನೀನು
ಬಾರೆ ಕಂದ ನೀನೆ ನಮ್ಮ ಬಾಳ ಬೆಳಕು"
ಚಲನ ಚಿತ್ರದ ಹಾಡನ್ನ್ ಹಾಡೋದೆ ಕೆಲಸವಾಗಿತ್ತು ನನಗೆ(ಮಾಡಲು ತಾನೆ ಇನ್ನೇನಿತ್ತು?)
ಮಗುವಿಗೆ ಯಾವ ಹೆಸರಿಡಬೇಕೆಂಬ ಪ್ರಶ್ನೆ ಉದಿಸಿತು
ಈ ಸಮಯದಲ್ಲಿ ಕಂಪ್ಯೂಟರ್ ನೋಡಬಾರದು ಎಂದರೂ ಕೇಳದೆ ಗೂಗಲ್ ಮಾಡಿ ಮಾಡಿ ಅವಳಿಗೆ ಹೆಸರನ್ನು
ಆರಿಸಿದೆ.
ಹನ್ನೊಂದನೇ ದಿನ ಅವಳಿಗೆ ನಾಮಕರಣ ಮಾಡುವ ದಿನ
ಅವಳಿಗೆ ತಲೆಗೆ ಎರೆದರು
ಮಗುವಿಗೆ ಎರೆಯುವ ಕೆಲಸವೇ ಒಂದು ದೊಡ್ಡ ಕಲೆಯಾಗಿತ್ತು.
ಆ ನೀರಿನ ಹಿತವಾದ ಬಿಸಿಗೋ ಏನೋ ಹಾಲು ಕುಡಿದು ನಿದ್ರಿಸಿದ ಮಗು ರಾತ್ರಿಯವರೆಗೆ ಎಚ್ಚರವಾಗಲೇ ಇಲ್ಲ. ಆಗಾಗ ಅವಳಿಗೆ ಬಲವಂತವಾಗಿ ಹಾಲು ಕುಡಿಸುವುದಷ್ಟೆ
ಮನೆಯಲ್ಲಿನ ಹೋಮ ಹವನ , ನೆಂಟರ ಗದ್ದಲ ಯಾವುದೂ ಅವಳನ್ನು ಎಬ್ಬಿಸಲು ಶಕ್ಯವಾಗಲಿಲ್ಲ
ರಾತ್ರಿ ನಾಮಕರಣದ ವೇಳೆಯಲ್ಲಿ ಕೊಂಚ ಅತ್ತಳಷ್ಟೆ
ನಮ್ಮಗಳ ಸಂಭ್ರಮ ಸಂತೋಷದ ಜೊತೆಗೆ ಅವಳಿಗಿಟ್ಟೇವು ಹೆಸರೊಂದನ್ನು
ಯಶಿತಾ ಅದುವೇ ನನ್ನ ಮಗಳ ಹೆಸರು
Monday, March 16, 2009
Thursday, March 12, 2009
ನನ್ನುದರದಿಂ ಇಳೆಗೆ ಧಾವಿಸಿದಳಾ ಯಶಿತಾ
ಮದುವೆಯಾಗಿ ತಿಂಗಳೊಂದು ಕಳೆದಿತ್ತೇನೋ
ಡಾಕ್ಟರ್ ನಾನು ಗರ್ಭಿಣಿ ಎಂದು ತಿಳಿಸಿದಾಗ ಸಂತಸವೇನೂ ಆಗಲಿಲ್ಲ . ಇಷ್ಟು ಬೇಗ ಮಗುವೇಕೆ ಬೇಕಿತ್ತು ಎಂಬ ಅಸಮಾಧಾನ ಮನದಲ್ಲಿ ಮೂಡಿತು.
ಇನ್ನೂ ಒಂದು ತಿಂಗಳಾದ್ದರಿಂದ ನಿಮಗೆ ಹಿಡಿಸದೇ ಇದ್ದರೆ ಎನಾದರೂ ,ಮಾಡೋಣ ಎಂದರು ಡಾಕ್ಟರ್
ನಮ್ಮ ಯಜಮಾನರು ಅವರನ್ನು ತರಾಟೆಗೆ ತೆಗೆದುಕೊಂಡರು.
ಎಲ್ಲಾ ತಾಯಂದಿರಿಗೂ ಆಗುವ ಹಾಗೆ ನನ್ನ ಅನುಭವಗಳೂ ಅಮೂಲ್ಯವಾದುದಾಗಿತ್ತು.
ಕೆಲಸದ ಮದ್ಯಯೂ ಹುಟ್ಟುವ ಮಗು ಹೇಗಿರ್ತ್ತೋ ಹೆಣ್ಣೋ ಗಂಡೋ ಎಂಬ ನಿರೀಕ್ಷೆಗಳು
ನೀವು ಸ್ಕೂಟಿನಲ್ಲಿ ಓಡಾಡಬೇಡಿ ಎಂದು ಡಾಕ್ಟರ್ ಹೇಳಿದ ಕೂಡಲೆ ಒಪ್ಪಿದೆ ಇನ್ನೂಹುಟ್ಟಿರದ ಮಗುವಿನ ಬಗ್ಗೆಯೇ ಸಾಕಷ್ಟು ಕಲ್ಪನೆಗಳು.ಕಾಳಜಿ
ಒತ್ತಡಗಳನಡುವೆ ಎಲ್ಲಿ ಮಗುವಿಗೆ ತೊಂದರೆಯಾಗುತ್ತದೆಯೋ ಎನ್ನುವ ಭಯ, ರೂಪ ನಿನ್ನ ಹೊಟ್ಟೆ ತುಂಬಾ ಮುಂದೆ ಬಂದಿಲ್ಲ ಖಂಡಿತಾ ಇದು ಗಂಡು ಮಗುವಿನ ಲಕ್ಷಣಾ ಎಂದಾಗಲೆಲ್ಲಾ
ಕೆಲವು ಜ್ಯೋತಿಷ್ಯ್ದದವರು ನಿಮಗೆ ಕ್ರಿಷ್ಣ ಹುಟ್ಟುತ್ತಾನೆ ಎಂದಾಗಲೆಲ್ಲಾ
ಹುಟ್ಟುವ ಮಗು ಗಂಡೇನೋ ಎಂದುಕೊಳ್ಳುತ್ತಿದ್ದೆ
ಹೊಟ್ಟೆಯಲ್ಲಿ ಪುಟ್ಟ ಮಗು ಓಡಾಡಿದಾಗಲ್ಲೆಲ್ಲಾ ಆಗುತ್ತಿದ್ದ ಸ
ಕೊನೆಗೂ ಆದಿನ ಬಂತು
ಇದ್ದಕಿದ್ದಂತೆ ಬೆಳಗಿನ ಜಾವ ನೀರೊಡೆದು
ಡಾಕ್ಟರ್ ಬಳಿ ಹೋದಾಗ ಸಿಸೇರಿಯನ್ ಮಾಡಬೇಕಾಗುತ್ತದೆ ಎಂದರು
ಒಂಬತ್ತು ಘಂಟೆಗೆ ರಾಹುಕಾಲವಿದ್ದುದರಿಂದ
ಅಷ್ತೊರೊಳಗೆ ಮಾಡಿಬಿಡಿ ಎಂದರು ಮನೆಯವರು
ಡಾಕ್ಸ್ಟರ್ ಅನಸ್ಥೇಶಿಯ ಕೊಟ್ಟವರೆಗಷ್ತೇ ಪೂರ ನೆನಪು ಬೆನ್ನು ಹುರಿಗೆ ಇಂಜೆಕ್ಷನ್ ಕೊಟ್ಟರು
ನಂತರದ್ದೆಲ್ಲಾ ಕನಸಿನಂತೆಯೇ ಭಾಸಾವಾಗುತ್ತಿತ್ತು
ಹೊಟ್ಟೆಯಮೇಲೆ ರಟ್ಟೊಂದನ್ನು ಕೂಯ್ದಂತೆ ಅನ್ನಿಸುತ್ತಿತ್ತು
ನಂತರ ಕಣ್ಮುಂದೆಯೇ ಎಲ್ಲಾ ನಡೆಯುತ್ತಿದ್ದರೂ ಏನೂ ತಿಳಿಯುತ್ತಿರಲಿಲ್ಲ
ಕೊನೆಗೊಮ್ಮೆ ನನ್ನೊಳಗಿನಿಂದ ಮಗುವನ್ನು ಎತ್ತಿದರೆನ್ನಿಸ್ಸುತ್ತದೆ
ಯಾವ ಮಗು ಅಂತ ಅಂದುಕೊಂಡಿದ್ರಿ
ಎಂದಾಗ ಯಾವುದಾದರೂ ಪರವಾಗಿಲ್ಲ ಎಂದುದಷ್ಟೆ ನೆನಪು
ಆಮೇಲೆ ನನ್ನನ್ನು ಯಾವುದೋ ಗುಂಡಿಗೆ ಹಾಕಿದಂತೆ ಆಯ್ತು
ಸ್ವಲ್ಪ ಹೊತ್ತಿನ ಮೇಲೆ ಎಲ್ಲೋ ಆಳದಿಂದ ನನ್ನನ್ನು ಕರೆದಂತಾಯ್ತು
"ರೂಪಾ"
ಕಣ್ಬಿಟ್ಟೆ, ಬಿಟ್ಟೆನಾ ಈಗಲೂ ಗೊತ್ತಿಲ್ಲ
ಎಲ್ಲರ ಮುಖಗಳು ವಿಚಿತ್ರವಾಗಿ ಉದ್ದುದ್ದವಾಗಿ ಕಾಣತೊಡಗಿದವು
"ನನ್ ಮಗು" ಎಂದಾಗ ಮಗುವನ್ನು ತೋರಿಸಿದರು
ಬಟ್ಟೆಯಲ್ಲಿ ಸುತ್ತಿದುದ್ದರಿಂದ ಯಾವುದೂ ತಿಳಿಯಲಿಲ್ಲ.
ಮತ್ತೆಕಣ್ಣು ಮುಚ್ಚಿದೆ. ಆಗಾಗ ಮಗು ಅಳುತ್ತಿತ್ತು. ನನ್ನ ಅಮ್ಮ ಹಾಗು ಅದರ ಅಪ್ಪ ಹಾಲೇನೋ ಹಾಕುತ್ತಿದ್ದರು
ಮಾರನೆಯದಿನವಷ್ತೇ ಮಗು ನನ್ನ ಬಳಿಗೆ ಬಂದದ್ದು ಅಲ್ಲ ನಾನೆ ಕರೆಸಿಕೊಂಡದ್ದು
ಅವಳನ್ನು ನೋಡುತ್ತಲೇ ನನ್ನ ಸಂತಸವೆಲ್ಲಾ ಒಮ್ಮೆಗೆ ಇಳಿದು ಹೋಯ್ತು
ಇದು ನಮ್ಮ್ಮ ಮಗುವೇನಾ ಎಂದನಿಸಿತು. ನಮ್ಮಲ್ಲಿ ಯಾರಹೋಲಿಕೆಯೂ ಇರದ ಅವಳ ಮುಖ ಕಂಡಾಅಗ ಹಾಗನಿಸಿದ್ದು ಸಹಜವೇ.
ಆದರೂ ಮಗುವನ್ನು ಬಳಿಯಲ್ಲಿ ಮಲಗಿಸಿದೆ. ನನ್ನೆಡೆಗೆ ಎಳೆದುಕೊಂಡೆ
ಮಗು ನನ್ನದೆಯ ಹಾಲನ್ನು ಅದೆಷ್ಟೋ ದಿನದಿಂದ ಸವಿಯುತ್ತಿರುವಂತೆ ಸವಿಯತೊಡಗಿದಳು.
ನಿಜಕ್ಕೂ ಆಶ್ಚರ್ಯ ಮಗುವಿಗೆ ಅಮ್ಮನ ಹಾಲನ್ನು ಕುಡಿಯುವದನ್ನಾರು ಹೇಳಿಕೊಡುತ್ತಾರೆ
ಮಗುವಿನ ಮೈದಡವತೊಡಗಿದೆ. ಪ್ರೀತಿಯ ಸಿಂಚನದ ಮೂರ್ತಿ ನನ್ನ ಮಗು . ನಾನು ತಾಯಿಯಾದೆ. ಹೆಮ್ಮೆಯೆನಿಸಿತು
ಹಾಲು ಕುಡಿದು ಸಮಾಧಾನವಾಯ್ತೇನೋ ಒಮ್ಮೆ ಪಿಳಿ ಪಿಳಿ ಕಣ್ಣು ಬಿಟ್ಟು ನನ್ನನ್ನುನೋಡಿದಳು . ಧನ್ಯಳಾದೆ ಎನಿಸಿತು
ಬಳಿಗೆಳೆದುಕೊಂಡು ಮುದ್ದಿಸಿದೆ
ಅಮ್ಮ ಬೈದರು
" ಏ ಹಾಗೆಲ್ಲಾ ಚಿಕ್ಕಮಗೂಗೆ ಮುತ್ತು ಕೊಡಬಾರದು"
ಕೋಪ ಬಂತು
ಹೀಗೆ ನನ್ನ ಮಗಳು ಧರೆಗೆ ಬಂದೆನ್ನ ಪಕ್ಕದಲ್ಲ್ಲಿ ಪವಡಿಸಿದಳು

Subscribe to:
Posts (Atom)