Monday, March 16, 2009

ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿ ಮನೆಗೆ ಬಂದ ನಂತರ ಒಂದು ರೂಮು ನಾನು ನನ್ನ ಮಗಳು ಸದಾ ಜೊತೆಗಿರುತ್ತಿದ್ದೆವು
ಒಂದು ರೀತಿಯಲ್ಲಿ ತಾಯಿ ಮಗು ಸಂಭಂಧ ಇನ್ನಷ್ಟು ಗಟ್ಟಿಯಾಗಲೆಂದು ಈ ರೀತಿ ಕೂಡಿ ಹಾಕುತ್ತಾರೆಂದು ಅನಿಸುತ್ತದೆ.
ಆ ದಿನಗಳಲ್ಲಿ ನನ್ನ ಹಾಗು ನನ್ನ ಮಗಳ ಭಾಂಧವ್ಯ ಬೆಳೆಯತೊಡಗಿತು
ಸದಾ ನನ್ನ ಜೊತೆಮಲಗಿ ಅವಳಿಗೆ ನನ್ನ ಮೈ ಶಾಖದ ಪರಿಚಯವಾಗತೊಡಗಿತೇನೋ . ನಾನು ಒಂದು ವೇಳೆ ಅವಳ ಮೇಲಿನಿಂದ ಕೈ ತೆಗೆದರೆ ಸಾಕು ಅಳುತ್ತಿದ್ದಳು.
ಅಬ್ಬಾ ಅದೆಷ್ಟು ಅಧಿಕಾರ ಅವಳಿಗೆ ನನ್ನ ಮೇಲೆ .ಇನ್ನೂ ಭೂಮಿಗೆ ಬಂದು ಆರು ದಿನವೂ ಕಳೆದಿಲ್ಲ ಎಂದೆನಿಸುತ್ತಿತ್ತು.
ಜೊತೆಗೆ ಹಸಿವಾದಾಗಲೆಲ್ಲ ನನ್ನೆಡೆಗೆ ತಿರುಗಬೇಕೆಂಬ ಅವಳ ಬುದ್ದಿಗೆ ನಿಜಕ್ಕೂ ಆಶ್ಚರ್ಯವಾಗುತ್ತಿತ್ತು
ಹಾಲುಗಲ, ಪುಟ್ಟ ಪುಟ್ಟ ತುಟಿಗಳು.ಮೊದಲನೆ ದಿನ ಇದ್ದ ಬಣ್ಣ ಈಗ ಬಿಳುಪಾಗಿ ಬದಲಾಗಿತ್ತು. ಅವಳು ಬೆಳೆಯುತ್ತಿದ್ದಂತೆಲ್ಲಾ ಅವಳ ರೂಪವೂ ಇನ್ನು ಮುದ್ದಾಗುತ್ತಿತ್ತು.
"ಪ್ರೀತಿ ಲೋಕದ ಸೂರ್ಯ ನೀನು, ಮೇಘರಾಜನ ಚಂದ್ರ ನೀನು
ಬಾರೆ ಕಂದ ನೀನೆ ನಮ್ಮ ಬಾಳ ಬೆಳಕು"
ಚಲನ ಚಿತ್ರದ ಹಾಡನ್ನ್ ಹಾಡೋದೆ ಕೆಲಸವಾಗಿತ್ತು ನನಗೆ(ಮಾಡಲು ತಾನೆ ಇನ್ನೇನಿತ್ತು?)

ಮಗುವಿಗೆ ಯಾವ ಹೆಸರಿಡಬೇಕೆಂಬ ಪ್ರಶ್ನೆ ಉದಿಸಿತು
ಈ ಸಮಯದಲ್ಲಿ ಕಂಪ್ಯೂಟರ್ ನೋಡಬಾರದು ಎಂದರೂ ಕೇಳದೆ ಗೂಗಲ್ ಮಾಡಿ ಮಾಡಿ ಅವಳಿಗೆ ಹೆಸರನ್ನು
ಆರಿಸಿದೆ.
ಹನ್ನೊಂದನೇ ದಿನ ಅವಳಿಗೆ ನಾಮಕರಣ ಮಾಡುವ ದಿನ
ಅವಳಿಗೆ ತಲೆಗೆ ಎರೆದರು
ಮಗುವಿಗೆ ಎರೆಯುವ ಕೆಲಸವೇ ಒಂದು ದೊಡ್ಡ ಕಲೆಯಾಗಿತ್ತು.
ಆ ನೀರಿನ ಹಿತವಾದ ಬಿಸಿಗೋ ಏನೋ ಹಾಲು ಕುಡಿದು ನಿದ್ರಿಸಿದ ಮಗು ರಾತ್ರಿಯವರೆಗೆ ಎಚ್ಚರವಾಗಲೇ ಇಲ್ಲ. ಆಗಾಗ ಅವಳಿಗೆ ಬಲವಂತವಾಗಿ ಹಾಲು ಕುಡಿಸುವುದಷ್ಟೆ
ಮನೆಯಲ್ಲಿನ ಹೋಮ ಹವನ , ನೆಂಟರ ಗದ್ದಲ ಯಾವುದೂ ಅವಳನ್ನು ಎಬ್ಬಿಸಲು ಶಕ್ಯವಾಗಲಿಲ್ಲ
ರಾತ್ರಿ ನಾಮಕರಣದ ವೇಳೆಯಲ್ಲಿ ಕೊಂಚ ಅತ್ತಳಷ್ಟೆ
ನಮ್ಮಗಳ ಸಂಭ್ರಮ ಸಂತೋಷದ ಜೊತೆಗೆ ಅವಳಿಗಿಟ್ಟೇವು ಹೆಸರೊಂದನ್ನು
ಯಶಿತಾ ಅದುವೇ ನನ್ನ ಮಗಳ ಹೆಸರು

2 comments:

  1. ’ನಮ್ಮಗಳ ಸಂಭ್ರಮ ಸಂತೋಷ’ ಎನ್ನುವ ಮೂಲಕ ನೀವು ನಿಮಗರಿವಿಲ್ಲದೆಯೇ ನಮ್ಮಗಳ ಎದುರಿಗೊಂದು ಶ್ಲೇಷೆಯನ್ನು ಇಟ್ಟಿದ್ದೀರಿ!
    ’ನಮ್ಮ್ ಮಗಳ ಸಂಭ್ರಮ ಸಂತೋಷ’ ಎಂದೂ ಹೇಳಿದ್ದೀರಿ!
    ನಿಮ್ಮ್ ಮಗಳ ಸಂಭ್ರಮ ಸಂತೋಷ ನಿಮಗಾಗಲೀ ಸ್ವಯಂ ನಿಮ್ಮ ಮಗಳಿಗಾಗಲೀ ನಾಮಕರಣದ ದಿನ ಅರಿವಿಗೆ ಬರದಿದ್ದರೂ ಈಗ ಅರಿವಿಗೆ ಬರುತ್ತಿದೆ, ಅನುಭವಕ್ಕೆ ದಕ್ಕುತ್ತಿದೆ ಅಲ್ಲವೆ? ಯಶಿತಾಳ ಫೋಟೊ ನೋಡಿ ಈ ಮಾತು ಹೇಳುತ್ತಿದ್ದೇನೆ.
    ’ಅವಳಿಗಿಟ್ಟೇವು ಹೆಸರೊಂದನ್ನು’ ಎಂದು ಹೇಳುವ ಮೂಲಕ ನೀವು (ಪುನಃ ನಿಮಗರಿವಿಲ್ಲದೆಯೇ) ಸುಂದರ ಭಾವನೆಯೊಂದನ್ನು ಬಿಂಬಿಸಿದ್ದೀರಿ!
    ’ಇಟ್ಟೇವು’ ಎಂಬ ಪದಪ್ರಯೋಗವನ್ನು ’ಇಟ್ಟೆವು’ ಎಂಬರ್ಥದಲ್ಲಿ (ಜಾನಪದ ಧಾಟಿಯಲ್ಲಿ) ಬಳಸಿದ್ದೀರಿ, ಸರಿಯೇ.
    ’ಇಟ್ಟೇವು’ ಎಂದರೆ, ’ಮುಂದೆ ನಾವು ಇಡಬಹುದು’ ಎಂಬ ಅರ್ಥವೂ ಹೊಮ್ಮುತ್ತದಷ್ಟೆ.
    Rightly said. ಮುಂದೆ ನಿಮ್ಮ್ ಮಗಳು ಯಶಸ್ಸಿನ ಮೆಟ್ಟಿಲನ್ನೇರಿದಾಗ ಆಕೆಯನ್ನು ನೀವು ’ಯಶಿತಾ’ ಎಂದು ಮಾತ್ರವಲ್ಲ, ’ಯಶಸ್ವಿನಿ’ ಎಂದು ಕೂಡ ಕರೆಯಬಹುದಲ್ಲವೆ?

    ReplyDelete
  2. ಅನಂದರವರೇ
    ನನಗರಿವಿಲ್ಲದೇ ಉಪಯೋಗಿಸಿದ ಕೆಲವು ಶಬ್ಧಗಳನ್ನು ಸುಂದರವಾಗಿ ವಿವರಿಸಿದ್ದೀರ.
    ನಿಮ್ಮಗಳ ಹಾರೈಕೆಯೊಂದಿಗೆ ಯಶಸಿನ ಮೆಟ್ಟಲನ್ನು ಖಂಡಿತಾ ಏರುತ್ತಾಳೆ ಎಂದು ಭಾವಿಸಿದ್ದೇನೆ

    ReplyDelete