Wednesday, August 26, 2009

ಇಂತಹ ಘಳಿಗೆ ಮತ್ತೊಮ್ಮೆ ಬಾರದಿರಲಿ

ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸೋರುತ್ತಿತ್ತು. ಗೊಳೋ ಎಂದು ಹಣೆ ಹಣೆ ಬಡಿದುಕೊಂಡು ಅಳುತ್ತಿದ್ದೆ. ಅಮ್ಮ ದಿಗ್ಬ್ರಾಂತರಾಗಿ ಕಿರುಚುತ್ತಿದ್ದರು ನಮ್ಮಮನೆಯವರ ಮೊಗದಲ್ಲಿ ಆತಂಕ ಜೊತೆಗೆ ಕಣ್ಣಲ್ಲಿ ನೀರು ನನ್ನ ಮುದ್ದಿನ ಯಶಿತಾಳ ಪರಿಸ್ಥಿತಿಯೇ ಹಾಗಾಗಿತ್ತು. ಕಾರ್ ದಾರಿಯ ನಡುವಲ್ಲಿ ನಿಂತು ಬಿಟ್ಟಿತು. ಯಶಿತಾ ಇದ್ದಕ್ಕಿದ್ದಂತೆ ಮೇಲು ಗಣ್ಣು ಮಾಡಿ ಸ್ಥಬ್ಧಳಾಗಿದ್ದಳು. ಇನ್ನು ಅವಳುನಮ್ಮ ಕೈ ತಪ್ಪಿದಂತೆ ಎಂದು ಅನ್ನಿಸಿತು
ಹೀಗಾಗುವುದಕ್ಕೆ ಹಿಂದಿನ ದಿನ ಯಶಿತಾ ನಾರ್ಮಲ್ ಆಗಿಯೇ ಸ್ಕೂಲಿಗೆ ಹೋಗಿ ಬಂದಳು ನನ್ನೊಡನೆ ಆಡುತ್ತಿದ್ದಳು.ನಂತರ ನಾನು ಇನ್ಸ್ಟ್ಯೂಟ್‌ಗೆ ಹೊರಟೆ
ಸಾಯಂಕಾಲ ಅವಳ ಅಪ್ಪನೊಡನೆ ಆಡುತ್ತಿದ್ದಳು
ಸ್ವಲ್ಪ ಹೊತ್ತಿನ ನಂತರ ಇವರಿಂದ ಫೋನ್ ಬಂತು. ರೂಪ ಮಗೂಗೆ ತುಂಬಾ ಜ್ವರ ಬೇಗ ಬಾ ಎಂದರು. ಡೋಲೋಪರ್ ಕೊಡಿ ಎಂದು ಹೇಳಿ ನನ್ನ ಕೆಲಸದಲ್ಲಿ ತಲ್ಲೀನಳಾದೆ.
ಮತ್ತೆ ಸ್ವಲ್ಪ ಹೊತ್ತಿನ ನಂತರ ನಮ್ಮ ಅಮ್ಮ ಫೋನ್ ಮಾಡಿ ಅವಳಿಗೆ ೧೦೨ ಡಿಗ್ರೀ ಜ್ವರ ಇದೆ ಎಂದಾಗ ಎದೆ ಡವಡವ ಎಂದಿತು ಕೂಡಲೆ ಹತ್ತು ನಿಮಿಷದಲ್ಲಿ ಹೊರಟೆ.
ಮನೆಗೆ ಹೋಗುವಷ್ಟ್ರರಲ್ಲಿ ಯಶಿತಾ ಮಲಗಿದ್ದಳು ಏನೇನೋ ಕನವರಿಸುತ್ತಿದ್ದಳು. ಮತ್ತೆ ಜ್ವರ ಚೆಕ್ ಮಾಡಿದಾಗ ಅದು ೧೦೩ ದಾಟಿತ್ತು .
ವೇಳೆ ಮಾಡಿದರೆ ಅಪಾಯ ಎಂದು ಮನಗಂಡು ಮಗುವನ್ನು ಡಾಕ್ಟರ್ ಬಳಿ ಒಯ್ದೆವು . ಅವರು ಏನೂ ಪ್ರಾಬ್ಲಮ್ ಇಲ್ಲ . ಎಂದು ಹೇಳಿ ಅವಳಿಗೆ ಆಂಟಿ ಬಯಾಟಿಕ್ ಸಿರಪ್ ಕೊಟ್ಟರು.
ಮನೆಗೆ ಬಂದು ಅವುಗಳನ್ನು ಕೊಟ್ಟೆವು
ಆದರೂ ರಾತ್ರಿ ಎಲ್ಲಾ ಜ್ವರ ಬಿಡಲಿಲ್ಲ
ಮಗು ಏನೇನೋ ಕನವರಿಸುತ್ತಿತ್ತು. ಜೊತೆಗೆ ನಮ್ಮಾರ ಬಗ್ಗೆಯೂ ಜ್ನಾನವೇ ಇಲ್ಲ. ಜ್ವರ ೧೦೩ಕ್ಕಿಂತ ಕೆಳಗಿಳಿಯಲಿಲ್ಲ
ಬೆಳಗ್ಗೆ ನಾರಾಯಣ ಹೃದಯಾಲಯಕ್ಕೆ ಕರೆದೊಯ್ದೆವು. ಡಾಕ್ಟರ್ ಪರಿಮಳಾ ಮಗುವನ್ನು ಚೆಕ್ ಮಾಡಿ ನನ್ನೊಂದಷ್ಟು ಬೈದರು . ಮಗುವಿಗೆ ಸ್ವೆಟರ್ ಹಾಕಿದ್ದೀರಾ ಅದಕ್ಕೆ ಉಷ್ಟತೆ ಜಾಸ್ತಿಯಾಗಿದೆ ಎಂದರು. ಅವರ ಮಗಳಿಗೆ ಹೀಗಾದಾಗ ಮಗಳನ್ನು ತಣ್ಣೀರು ಸುರಿಯುವ ನಲ್ಲಿಯ ಕೆಳಗೆ ಕೂರಿಸಿದ್ದರಂತೆ. ಹಾಗೆ ಮಾಡಿದರೆ ಉಷ್ಣತೆ ಇಳಿಯುತ್ತದೆ ಎಂದು ಹೇಳಿ ಮತ್ತೆ ಬೇರೆ ಸಿರಪ್ ಕೊಟ್ಟರು. ಹಾಗೆಯೇ ಒಂದಷ್ಟು ಟೆಸ್ಟ್ ಮಾಡಿಸಲು ಹೇಳಿದರು. ಮಗುವಿನ ರಕ್ತ ಮೂತ್ರ ಕೊಟ್ಟು ಬಂದೆವು.
ಮಗುವನ್ನು ಮನೆಗೆ ಕರೆದುಕೊಂಡು ಬಂದೆವು.
ಹನ್ನೆರೆಡು ಘಂಟೆಯಾಯ್ತು. ಮಗುವಿನ ಜ್ವರ ಇಳಿಯಲ್ಲಿಲ್ಲ ಬದಲಾಗಿ ಪಾಯಿಂಟ್‍ಗಳಷ್ಟು ಜಾಸ್ತಿಯಾಗತೊಡಗಿತು. ಅಲ್ಲಿಯವರೆಗೆ ಕನಿಷ್ಟ ಮಾತಾಡುತ್ತಿದ್ದ ಆಕೆಯ ದನಿ ಕೊಂಚ ಕೊಂಚ ಕ್ಷೀಣಾವಾಗತೊಡಗಿತು.
ನಮಗೆ ಮತ್ತೆ ಭಯವಾಗತೊಡಗಿತು
ಮತ್ತೊಮ್ಮೆ ಪರಿಮಳಾರ ಬಳಿ ಕರೆದೊಯ್ದೆವು.
ಅಡ್ಮಿಟ್ ಮಾಡುವುದಾದರೆ ಮಾಡಿರಿ ಎಂದಾಗ ನೀವು ಹೆದರುತ್ತೀರಾ ಎಂದು ಮಾಡಬೇಕಷ್ಟೆ ಇಲ್ಲವಾದಲ್ಲಿ ಯಾವ ತೊಂದರೆಯೂ ಇಲ್ಲ ಎಂದು ಹೇಳಿದರು . ಅಷ್ಟ್ರಲ್ಲಿ ಅವಳ ಬ್ಲಡ್ ರಿಪೋರ್ಟ್ ಬಂದಿತ್ತು ಯಾವ ತೊಂದರೆಯೂ ಇಲ್ಲ ಎಂದು ಹೇಳಿದರು.
ಮಗು ಸುಸ್ತಾಗಿರುವುದರಿಂದ ಹತ್ತಿರದ ಯಾವುದಾದರೂ ಹಾಸ್ಪಿಟಲ್‌ನ್ಅಲ್ಲಿ ಐವಿ ಫ್ಲುಯೆಡ್ಸ್ ಹಾಕಿಸಿ ಎಂದು ಹೇಳಿದರು
ಮತ್ತೆ ಮಗುವನ್ನು ಮನೆಯ ಬಳಿ ಇರುವ ಅಪಲೋ ಹಾಸ್ಪಿಟಲ್ ‍ಗೆ ಕರೆದೊಯ್ದು ಐವಿ ಫ್ಲುಯೆಡ್ಸ್ ಹಾಕಿಸಲು ಕರೆದುಕೊಂಡು ಬಂದೆವು
ಅಲ್ಲಿಯ ನರ್ಸ್ಗಳಿಗೆ ಮಗುವಿನ್ ನರ ಸಿಗಲಿಲ್ಲ ಸುಮಾರು ಐದಾರು ಕಡೆ ಚುಚ್ಚಿದರೂ ಪ್ರಯೋಜನವಾಗಲಿಲ್ಲ. ಯಾವೊಬ್ಬ ನರ್ಸ್‌ಗೂ ಡಾಕ್ಟರ್‌ಗೂ ಆ ಸಾಮರ್ಥ ಇರಲಿಲ್ಲ. ಮಗು ಪೂರ ಸುಸ್ತಾಗಿತ್ತು. ಅವಳೇನೋ ಹೇಳುತ್ತಿದ್ದಾಳೋ ಯಾವುದೂ ತಿಳಿಯಲಿಲ್ಲ. ಕೊನೆಗೆ ಹಾಸ್ಪಿಟಲ್ನವರು ಮೈನ್ ಹಾಸ್ಪಿಟಲ್‌ಗೆ ಕಳಿಸೋಣ ಎಂದಾಗ ನಾವು ಒಪ್ಪಲಿಲ್ಲ ಅಲ್ಲಿಂದ ಸುಮಾರು ಮುಕ್ಕಾಲು ಘಂಟೆ ಪ್ರಯಾಣ ಅಪಲೋ ಮೇನ್ ಹಾಸ್ಪಿಟಲ್ಗೆ
ಕೊನೆಗೆ ಇವರು ನಿರ್ಧರಿಸಿ ಮತ್ತೆ ನಾರಾಯಣಕ್ಜ್ಕೆ ಬರುತ್ತಿದ್ದಂತೆ ಮಗು ಇದ್ದಕಿದಂತೆ ಬೆಚ್ಚಿತು. ಅದರ ಕೈ ಕಾಲುಗಳು ಅದುರಲಾರಂಭಿಸಿತು ಕಣ್ಣುಗಳು ಮೇಲುಗಣ್ಣಾದವು. ನನಗೆ ಶಾಕ್ ಕಾರ್ ನಿಲ್ಲಿಸಿ ಅಳಲಾರಂಭಿಸಿದೆ . ಅಬ್ಬಾ ಅಂಥಾ ಘಳಿಗೆ ಮತ್ತೆ ನೋಡುವುದೂ ಬೇಡ ಅಂಥ ಕರ್ಮ. ನನ್ನ ಯಾವ ಜನ್ಮದ ಪಾಪವೊ ನನ್ನ ಮಗಳಿಗೆ ತಾಕಿದೆ ಎಂದನಿಸಿತು. ಇವರು ರಾಘವೆಂದ್ರರನ್ನು ಬೇಡಿಕೊಂಡರು .ನಾನು ಹಣೇ ಹಣೆ ಬಡಿದುಕೊಳ್ಳಲಾರಂಭಿಸಿದೆ. ಮಗು ನಿಸ್ತೇಜಗೊಳ್ಳಲಾರಂಭಿಸಿತು
ಆಗಲೇ ಇದು ಫಿಟ್ಸ್‌ನ ಲಕ್ಷ್ಬಣವಿರಬಹುದು ಎಂದನಿಸಿ ಕೈನಲಿದ್ದ ಕೀಯನ್ನು ಯಶಿತಾ ಕೈಗೆಕೊಟ್ಟೆ. ಹಾಗೆ ಸ್ವಲ್ಪಹೊತ್ತಿನಲಿ ನನ್ನ ಮೇಲೊರಗಿದಳು. ಉಸಿರಾಡುತ್ತಿದ್ದಳಷ್ಟೆ ಮತ್ತಿನಾವ ಚಲನೆಯೂ ಇಲ್ಲ.
ಅಲ್ಲಿಂದ ನಾರಾಯಣಕ್ಕೆ ಬಂದು ಆಂಕಾಲಜಿ ಕಟ್ಟಡಕ್ಕೆ ಕರೆದುಕೊಂಡು ಬಂದೆವು.
ಅಲ್ಲಿಂದ ಐಸಿಯುಗೆ ಕೂಡಲೆ ಅಡ್ಮಿಟ್ ಮಾಡಿದರು . ಆ ಸಂದರ್ಭದಲ್ಲು ಹಣದ ಬಗ್ಗೆ ಮಾತಾಡುತ್ತಿದ್ದ ಡಾಕ್ಟರ್‌ಗೆ ನಮ್ಮ ಮನೆಯವರು ಬೈದರು. ನನಗೆ ನನ್ನ ಮಗಳು ಮುಖ್ಯ. ಇನ್ಸೂರೆನ್ಸ್ ಇರಲಿ ಇಲ್ಲದಿರಲಿ ಲಕ್ಶವಾಗಲಿ. ಐಯಾಮ್ ರೆಡಿ ಟು ಪೇ ಪ್ಲೀಸ್ ಆಡ್ಮಿಟ್ ಹರ್ ಎಂದೇ ಕಿರುಚಿದರು
ನಾನು ನನ್ನ ಮಗುವನ್ನು ಬದುಕಿಸಿಕೊಡಿ ಎಂದು ಮಾತ್ರ ಬೇಡಿಕೊಳ್ಳುತ್ತಿದ್ದೆ ಮತ್ತಾವ ವಿಷಯವೂ ತಲೆಗೆ ಹೋಗಲಿಲ್ಲ. ಮಗುವನ್ನು ಐಸಿಯುನಲ್ಲಿ ಇರಿಸಿದರು ಅಂದು ಪೂರ್ತಿ ಅಲ್ಲೇ ಇದ್ದಳು.
ಒಂದುವಾರ ಆಸ್ಪತ್ರೆಯಲ್ಲೇ ಇದ್ದೆವು. ವಾರದ ನಂತರ ಡಿಸ್ಚಾರ್ಜ್ ಆಯ್ತು
ದೇವರ ದಯದಿಂದ ಯಶಿತಾ ಈಗ ಹುಷಾರಾಗಿದ್ದಾಳೆ . ನೆನ್ನೆಯಿಂದ ಮತ್ತೆ ಸ್ಕೂಲಿಗೆ ಹೋಗುತ್ತಿದ್ದಾಳೆ. ಹೋದವಾರವೇ ಈ ಬಗ್ಗೆ ಬರೆಯೋಣ ಎಂದನಿಸಿದರೂ ಮಗು ಮೊದಲು ಪೂರ್ಣ ಗುಣವಾಗಲಿ ಎಂದು ಸುಮ್ಮನಿದ್ದೆ
ಈ ಸಮಯದಲ್ಲಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿದ ಸಂಪದ ಮಿತ್ರರೆಲ್ಲಾರಿಗೂ ನನ್ನ ವಂದನೆಗಳು

3 comments:

  1. ಪುಟ್ಟ ಯಶುವಿನ ಅನಾರೋಗ್ಯದ ವಿಚಾರ, ಆ ಸಮಯದಲ್ಲಿ ನಿಮ್ಮ ಆತಂಕ ಗಾಭರಿ ಎಲ್ಲಾ ಓದಿದೆ. ಯಶು ಈಗ ಆರಾಮಿರುವುದು ತಿಳಿದು ನಿರಾಳವೆನಿಸಿತು.
    ಚಿಕ್ಕಮಕ್ಕಳಲ್ಲಿ ಜ್ವರ ಅತೀ ಹೆಚ್ಚಾದಾಗ ಈ ರೀತಿ ಫಿಟ್ಸ್ ಬರುವುದುಂಟು ಅದಕ್ಕೆ ’Febrile Convulsions' ಅನ್ನುತ್ತಾರೆ, ಗಾಬರಿ ಪಡುವಂತದ್ದೇನಿಲ್ಲ!
    ಯಶುವಿಗೆ ದೇವರು ಆಯುರಾರೋಗ್ಯ ದಯಪಾಲಿಸಲೆಂದು ಹಾರೈಸುವೆ:))

    ReplyDelete
  2. ನಿಮ್ಮ ಸ್ಥಾನದಲ್ಲಿ ಯಾರೇ ಇದ್ದರೂ ಆತಂಕಗೊಳ್ಳುತ್ತಿದ್ದರು. ಸದ್ಯ ಮಗುವಿಗೆ ಗುಣವಾಯಿತಲ್ಲ! ದೇವರು ದೊಡ್ಡವನು.
    ಅಂದಹಾಗೆ "ಯಶಿತಾ" - ಹೆಸರು ಚೆನ್ನಾಗಿದೆ.

    ReplyDelete
  3. ಯಶುವಿಗೆ ಭಗವಂತ ಆಯುರಾರೋಗ್ಯ ದಯಪಾಲಿಸಲಿ
    ನಿಮ್ಮ ಲೇಖನ ಓದಿ ಮನಸ್ಸಿಗೆ ಏನೋ ಒಂಥರಾ ಆಯಿತು

    ReplyDelete